ನನ್ನ ಹೃದಯದ ಮೇಲೆ ನೀ ಮಾಡಿದ ಪ್ರೀತಿಯ ಅಕ್ಷರ,
ನಾ ಅಳಿಯದಂತೆ ಉಳಿಸಿದೆ ನನ್ನೊಳಗೆ ಅದರ ಹಸಿರ,
ನನ್ನ ಪ್ರತಿ ಮಿಡಿತವು ಪ್ರತಿಧ್ವನಿಸಿದೆ ನಿನ್ನ ಹೆಸರ,
ಅದಾಗಿದೆ ಈಗ ನನ್ನೆದೆಯ ಸ್ವರ,
ತಿಳಿಯದಂತೆ ಇದಾಯ್ತು ಗೆಳತಿ ನೀ ನನಗೆ ಕೊಟ್ಟ ಹಸ್ತಾಕ್ಷರ..
ನಿನ್ನ ಕಣ್ಣುಗಳು ಬಾನಲ್ಲಿ ಹೊಳೆಯುವ ನಕ್ಷತ್ರ,
ನಿನ್ನ ಕಂಡ ದಿನವೇ ಬಿಡಿಸಿದೆ ಮನದ ಪರದೆಯ ಮೇಲೆ ನಿನ್ನ ಚಿತ್ರ,
ಅಂದಿನಿಂದ ರಾತ್ರಿಯಲಿ ಬರುವ ಕನಸುಗಳು ವಿಚಿತ್ರ,
ತಿಳಿಸೆಯ ಗೆಳತಿ ಇದರ ಅರ್ಥ ಬಂದು ನೀ ಹತ್ತಿರ !!!!