Thursday, February 24, 2011

ಚಂಚಲಗೊಂಡಿದೆ ಮನ!!

ಏಕೋ ಮನವು ಇಂದು ಚಂಚಲಗೊಂಡಿದೆ
ಬರೆಯಲು ಏನನೋ ಕಾತರಗೊಂಡಿದೆ

ಮರೆಯಲು ಯತ್ನಿಸುತ್ತಿರುವೆ ನಿನ್ನಯ ನೆನಪ
ಅದಕೆಂದೆ ಮಾಡಿಕೊಂಡೆ ದೇವನಲ್ಲಿ ಬಗೆ ಬಗೆಯ ಬಿನ್ನಪ

ನೆನಪಿನಂಗಳದಿ ಕಾಣುತಿಹುದು ನಿನ್ನ ಕಿರುನಗೆ
ತಿಳಿಸೆಯಾ ನೀ ಅದ ಮರೆಯುವ ಬಗೆ

ಚೂರಾಯಿತು ನಾ ಕಟ್ಟಿದ ಕನಸಿನ ಗೋಪುರ
ಆದ ಕ್ಷಣ ನೀ ನನ್ನಿಂದ ದೂರ

ಅನಿಸಿತು ನನಗೆ ಇದೆಂತಹ ವಿಪರ್ಯಾಸ
ಹೀಗೂ ಮಾಡುವುದು ವಿಧಿಯು ಬಾಳಲಿ ಪರಿಹಾಸ

ಕಲಿತೆ ಇದರಿಂದ ಒಂದು ಅಮೂಲ್ಯ ಪಾಠ
ಬದುಕಿನಲ್ಲಿ ಆಡಬೇಕು ಎಚ್ಚರಿಕೆಯ ಆಟ

ಇದೇ ಬಾಳಿನ ಸಾಮರಸ್ಯ!

No comments:

Post a Comment